Tuesday, March 10, 2009

ನನ್ನ ಚಪ್ಪಲಿ ಅವಾಂತರ..

ಮೊನ್ನೆ ಏಕೋ ಇದ್ದಕ್ಕಿದ್ದಂತೆ ನಮ್ಮೂರಿಗೆ ಹೋಗೋ ಮನಸಾಯ್ತು. ಶುಭ ಕಾರ್ಯಕ್ಕೆ ತಡ ಏಕೆ ಹೊರಟೇ ಬಿಟ್ಟೆ.ರೈಲ್ನಲ್ಲಿ ಹೋಗುವುದೋ ಅಥವಾ ಬಸ್ಸಿನಲ್ಲೋ ಅನ್ನುವ ವಿಚಾರವಾಗಿ ಬಹಳ ಗಹನವಾಗಿ ಯೋಚಿಸಿದ ನಂತರ ರೈಲೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಮುಂಗಡ ಸ್ಥಳ ಇದೆಯಾ ಎಂದು ವಿಚಾರಿಸಿದೆ. ನನ್ನ ಅದೃಷ್ಟಕ್ಕೆ ಶಯನಾಸನಗಳು ಖಾಲಿ ಇದ್ದವು. ಒಂದು ಸ್ಥಳ ಕಾಯ್ದಿರಿಸಿದೆ.

ರಾತ್ರಿ ೧೧:೪೫ ಕ್ಕೆ ರೈಲು. ಬಸ್ಸು ಸಿಗಲಾರದೆಂದು ೧೦:೧೫ ಕ್ಕೇ ಮನೆಯಿಂದ ಹೊರಟೆ. ಕೆಲವೊಮ್ಮೆ ಗಂಟೆಗಟ್ಟಲೆ ಕಾದರೂ ಬರದ ಬಸ್ಸು ಅಂದು ನಾನಿಂತ ಐದೇ ನಿಮಿಷಕ್ಕೆ ಬಂತು. ೧೦:೪೫ರ ಒಳಗಾಗಿ ನಾನು ರೈಲ್ವೇ ಸ್ಟೇಷನ್ನಲ್ಲಿದ್ದೆ. ೧೧ ಗಂಟೆಗೆ ಸರಿಯಾಗಿ ಟ್ರೈನ್ ಬಂತು. ರಾತ್ರಿ ಹನ್ನೊಂದಾದರೂ ತಂಪಾಗದ ವಾತವರಣ ಬೇಸಿಗೆ ಕಾಲದ ಮುನ್ಸೂಚನೆ ನೀಡುತ್ತಿತ್ತು. ನನ್ನದು ಅಪ್ಪರ್ ಬರ್ತ್ ಬೇರೆ , ಅಲ್ಲಿ ಗಾಳಿ ಕಡಿಮೆ ಹಾಗು ಸೆಖೆ ಜಾಸ್ತಿ. ಹೇಗಪ್ಪ ಮೇಲೆ ಮಲಗೋದು ಅಂತ ಯೋಚಿಸುತ್ತಿರುವಾಗಲೇ ನನ್ನ ಕೆಳಗಿನ ಆಸನದ ಜನ ಬಂದರು. (ಇಬ್ಬರು ಹೆಂಗಸರು ಮತ್ತು ಒಬ್ಬ ಹುಡುಗ ಪ್ರಾಯಶಃ ೧೦ನೆ ತರಗತಿ ಅನ್ಸುತ್ತೆ) . ನಾನು ನನ್ನ ಚಪ್ಪಲಿ ಕಳಚಿ ನನ್ನ ಆಸನದಲ್ಲಿ ಒರಗಿಕೊಂಡೆ. ನಿದ್ದೆ ಯಾವಾಗ ಬಂತೋ ಗೊತ್ತಿಲ್ಲ, ಮಧ್ಯೆ ಯಾಕೋ ಎಚ್ಚರ ಆಯ್ತು. ನನ್ನ ಚಪ್ಪಲಿ ಕೆಳಗಡೆ ಇದೆಯಾ ಅಂತ ಖಚಿತಪಡಿಸಿಕೊಂಡು ಮತ್ತೆ ಮಲಗಿದೆ.

ಆಮೇಲೆ ಎಚ್ಚರವಾದಾಗ ರೈಲು ಶಿವಮೊಗ್ಗದಲ್ಲಿ ನಿಲ್ಲುತ್ತಿತ್ತು. ಕೆಳಗಡೆ ಆಸನದ ಮಹನೀಯರು ಮತ್ತು ಮಹಿಳೆಯರು ಹೋಗಲೆಂದು ನನ್ನ ಸೀಟ್ನಲ್ಲೆ ಕಾದೆ. ಅವರೆಲ್ಲ ಹೋದನಂತರ ಮೇಲಿಂದಲೇ ನನ್ನ ಚಪ್ಪಲಿಗಾಗಿ ಹುಡುಕಿದೆ, ಕಾಣಲಿಲ್ಲ . ಗಾಬರಿಯಾಗಿ ಕೆಳಗಡೆ ಇಳಿದು ನೋಡಿದೆ, ಒಂದು ಸೀಟ್ ನ ಮೂಲೆಯಲ್ಲಿ ಒಂದು ಚಪ್ಪಲಿ ಸಿಕ್ಕಿತು. ಕಳ್ಳತನವಾಗಿಲ್ಲ ಅನ್ನೋ ಧೈರ್ಯ ಬಂತು. ಇನ್ನೊಂದು ಚಪ್ಪಲಿಗಾಗಿ ಹುಡುಕಾಡಿದೆ, ಊಹೂಂ ಇರಲಿಲ್ಲ. ಇನ್ನೊಂದು ಸೀಟ್ ನ ಕೆಳಗಡೆ ನೋಡಿದರೆ ನನ್ನ ಚಪ್ಪಲಿಯ ರೀತಿಯದ್ದೇ ಇನ್ನೊಂದು ಚಪ್ಪಲಿ ಇತ್ತು. ಆಗ ನನಗೆ ಅರ್ಥ ಆಯಿತು . ಓಹೋ ಕೆಳಗಡೆ ಸೀಟ್ ನಲ್ಲಿ ಮಲಗಿದ್ದ ಆ ೧೦ನೆ ತರಗತಿಯ ಹುಡುಗ ನನ್ನ ಒಂದು ಚಪ್ಪಲಿ ಹಾಗೂ ಅವನ ಇನ್ನೊಂದು ಚಪ್ಪಲಿ ಹಾಕಿಕೊಂಡು ಹೋಗಿದ್ದಾನೆ ಅಂತ !. ಅವನನ್ನು ಮನಸ್ಸಿನಲ್ಲಿ ಒಂದಿಷ್ಟು ಬೈದುಕೊಂಡು ಅವನ ಚಪ್ಪಲಿಯನ್ನು ಸರಿಯಾಗಿ ನೋಡಿದೆ ಎರಡೂ ಎಡಗಾಲಿನ ಚಪ್ಪಲಿ !! .ಅವನು ಎರಡೂ ಬಲಗಾಲಿನ ಚಪ್ಪಲಿ ಹಾಕಿಕೊಂಡು ಹೋಗಿದ್ದ (ಬುದ್ದಿವಂತ ಮಹಾಶಯ).ಸುಮ್ಮನೆ ಅವನ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡು ನೋಡಿದೆ, ಅವನ ಚಪ್ಪಲಿ ತುಂಬಾ ಸಣ್ಣ !!!.

ರೈಲ್ವೇ ನಿಲ್ದಾಣದ ಸ್ಥಿತಿ ನೋಡಿ ಬರಿಗಾಲಲ್ಲಿ ನನಗೆ ಹೋಗಲು ಮನಸಾಗಲಿಲ್ಲ. ಆಕಡೆ ಈಕಡೆ ನೋಡಿ ಯಾರೂ ನೋಡಿಲ್ಲ ಅನ್ನೋದನ್ನ ಖಾತ್ರಿ ಪಡಿಸಿಕೊಂಡು ಮನೆ ಕಡೆ ನಡೆದೆ. ನಂತರ ಮಾಡಿದ ಮೊದಲನೆ ಕೆಲಸ ಅಂದ್ರೆ ಹೊಸ ಚಪ್ಪಲಿ ಖರೀದಿಸಿದ್ದು.

Saturday, November 29, 2008

ಭಯೋತ್ಪಾದನೆಯ ಭಯದಲ್ಲಿ ಭಾರತ

ನವೆಂಬರ್ ೨೬, ಭಯೋತ್ಪಾದಕರ ಅಟ್ಟಹಾಸಕ್ಕೆ ಮತ್ತೊಮ್ಮೆ ಗುರಿಯಾಗಿದೆ ವಾಣಿಜ್ಯ ನಗರಿ. ಉಗ್ರರು ಮುಂಬೈ ನಗರದ ಹನ್ನೊಂದು ಪ್ರಮುಖ ಪ್ರದೇಶಗಳಲ್ಲಿ ಕಂಡ ಕಂಡವರ ಮೇಲೆ ಗುಂಡಿನ ಸುರಿಮಳೆಗೈದು ಅಸಂಖ್ಯಾತ ಜನರನ್ನು ಕೊಂದಿದ್ದು , ಮೂರು ಪ್ರಮುಖ ಹೋಟೆಲ್ ಗಳಿಗೆ ನುಗ್ಗಿ ಅಲ್ಲಿನ ಜನರನ್ನು ಬಂಧಿಯಾಗಿರಿಸಿಕೊಂಡಿದ್ದು ಈಗ ಇತಿಹಾಸ.

ಇದು ಈ ವರ್ಷದಲ್ಲಿ ಆದ ಮೊದಲ ಭಯೋತ್ಪಾದನೆಯ ಘಟನೆಯಲ್ಲ. ಸತತ ಹನ್ನೊಂದನೇ ಬಾರಿ ನಡೆಯುತ್ತಿರುವ ಮನ ಕಲಕುವ ಕೃತ್ಯ.
೧. ಜನವರಿ ೨೦೦೮ ರಲ್ಲಿ ರಾಮಪುರದಲ್ಲಿ ಸಿಆರ್ ಪಿಎಫ್ ಕೇಂದ್ರದ ಮೇಲೆ ಉಗ್ರರ ದಾಳಿ. ಎಂಟು ಮಂದಿ ಬಲಿ.
೨. ಮೇ ೧೩ ರಂದು ಜೈಪುರದಲ್ಲಿ ಸರಣಿ ಬಾಂಬ್ ಸ್ಪೋಟ , ೬೮ ಜನರ ದಾರುಣ ಸಾವು.
೩. ಜೂನ್ ೨೫ ರಂದು ಬೆಂಗಳೂರಿನಲ್ಲಿ ಕಡಿಮೆ ಸಾಮರ್ಥ್ಯದ ಬಾಂಬ್ ಸ್ಪೋಟ , ಒಬ್ಬನ ಬಲಿ.
೪. ಜುಲೈ ೨೬ , ಅಹಮದಾಬಾದ್ನಲ್ಲಿ ಕೇವಲ ಎರಡು ಘಂಟೆ ಅವಧಿಯಲ್ಲಿ ೨೦ ಬಾಂಬ್ ಸ್ಪೋಟ. ೫೦ ಬಲಿ.
೫. ಸೆಪ್ಟೆಂಬರ್ ೧೩ , ಹೊಸದಿಲ್ಲಿಯಲ್ಲಿ ನಗರದ ೬ ಕಡೆ ಸ್ಪೋಟ, ೨೬ ಬಲಿ.
೬. ಸೆಪ್ಟೆಂಬರ್ ೨೭, ಹೊಸದಿಲ್ಲಿಯಲ್ಲಿ ಮೆಹರೌಲಿ ಮಾರುಕಟ್ಟೆಯಲ್ಲಿ ಕಚ್ಚ ಬಾಂಬ್ ಸ್ಪೋಟ, ೩ ಬಲಿ.
೭. ಸೆಪ್ಟೆಂಬರ್ ೨೯, ಗುಜರಾತ್ ನ ಮೊದಸದಲ್ಲಿ ಮಸೀದಿ ಬಳಿ ಮೋಟರ್ ಸೈಕಲ್ ನಲ್ಲಿ ಬಂದ ಉಗ್ರನಿಂದ ಬಾಂಬ್ ಸ್ಪೋಟ ಒಂದು ಸಾವು, ಅನೇಕರಿಗೆ ಗಾಯ.
೮. ಸೆಪ್ಟೆಂಬರ್ ೨೯,ಮಹಾರಾಷ್ಟ್ರದ ಮಾಲೆಗಾಂವ್ ನ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟ ೫ ಬಲಿ
೯. ಅಕ್ಟೋಬರ್ ೨೧, ಇಂಫಾಲ್ ನಲ್ಲಿ ಮಣಿಪುರ ಪೋಲಿಸ್ ಕಮಾಂಡೋ ಕಾಂಪ್ಲೆಕ್ಷ ಬಲಿ ಶಕ್ತಿಶಾಲಿ ಬಾಂಬ್ ಸ್ಪೋಟಕ್ಕೆ ೧೭ ಬಲಿ.
೧೦. ಅಕ್ಟೋಬರ್ ೩೦, ಅಸ್ಸಾಂನಲ್ಲಿ ೧೮ ಕಡೆ ಬಾಂಬ್ ಸ್ಪೋಟಗೊಂದು ೭೭ ಬಲಿ, ನೂರಾರು ಮಂದಿಗೆ ಗಾಯ.
೧೧. ಈಗ ನವೆಂಬರ್ ೨೬ ರಂದು ಮುಂಬೈ ನಗರದ ಒಬೆರೋಯ್,ತಾಜ್ ಪಂಚತಾರಾ ಹೋಟೆಲ್ , ಸಿ ಎಸ್ ಟಿ ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಕಡೆ ಉಗ್ರರ ಗುಂಡಿನ ದಾಳಿ, ೨೦೦ ಕ್ಕೂ ಹೆಚ್ಚಿನ ಜನರ ಸಾವು, ಸಾವಿರಾರು ಮಂದಿ ಗಾಯಾಳು.

ಇಂಥಹ ಘಟನೆಗಳು ನಡೆದಾಗಲೆಲ್ಲ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳ ಸುರಿಮಳೆಗಳೇ ಎದ್ದೆಳುತ್ತವೆ . ಇದು ಹೇಗಾಯ್ತು ?,ಯಾರ ಕೈವಾಡ ? ನಾವೆಷ್ಟು ಸುರಕ್ಷಿತರು? .....

ಇವೆಲ್ಲವುದರ ಜೊತೆಗೆ ನಾವು ನಮ್ಮನೊಂದು ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಅದೇನೆಂದರೆ ಇವೆಲ್ಲ ನಿಲ್ಲುವುದೆಂತು ?
ನನ್ನ ಪ್ರಕಾರ ಎಲ್ಲಿಯವರೆಗೆ ಜನರು ಜಾಗೃತರಾಗಿ ಭಯೋತ್ಪಾದನೆಯ ನಿವಾರಣೆಗೆ ಕಾರ್ಯಪ್ರವೃತ್ತ ರಾಗುವುದಿಲ್ಲವೋ, ಎಲ್ಲಿಯವರೆಗೆ "ಜನಸೇವಕರು" ಎಂದು ಮೆರೆಯುವ ರಾಜಕೀಯ ಪುಡಾರಿಗಳು ಇನ್ನೊಂದು ಪಕ್ಷದ ಮೇಲೆ ಕೆಸರೆರಚುವುದನ್ನು ಬಿಟ್ಟು ಭಯೋತ್ಪಾನೆಯ ನಿಗ್ರಹಕ್ಕೆ ಶಿಸ್ತಿನ ಕ್ರಮಗಳನ್ನು ಕೈಗೊಲ್ಲುವುದಿಲ್ಲವೋ ಅಲ್ಲಿಯವರೆಗೆ ಈ ರೀತಿಯ ಘಟನೆಗಳು ಮರುಕಳಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಹಾಗಾದರೆ ನಾವು ಎಡವಿದ್ದೆಲ್ಲಿ? ಕಾರಣ ಹುಡುಕುತ್ತಾ ಹೋದರೆ ನಮ್ಮ ಕಣ್ಣಿಗೆ ಕಾರಣಗಳ ರಾಶಿಯೇ ರಾಚುತ್ತದೆ.
೧. ಯಾವುದೋ ನಗರಿಯಲ್ಲಿ ಬಾಂಬ್ ಬಿದ್ದರೆ ನಮಗೇನು ಎನ್ನುವ ಜನರ ತಾತ್ಸಾರ ಮನೋಭಾವನೆ
೨. ಕೊಳಕು ರಾಜಕೀಯ. ನಮ್ಮ ದೇಶಕ್ಕಿಂತ ತಮ್ಮ ಪಕ್ಷ ಬಲಪಡಿಸುವುದರಲ್ಲಿ ತೊಡಗಿರುವ ರಾಜಕಾರಣಿಗಳು
೩. ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ , ಎಲ್ಲ ಅಹಿತಕರ ಘಟನೆಗಳು ನಡೆದ ಮೇಲೆ ಎಚ್ಚೆತ್ತುಕೊಳ್ಳುವ ಸರಕಾರ.
೪. ಜವಾಬ್ದಾರಿಯುತ ಹುದ್ದೆಗಳು ಅಸಮರ್ಥರ ಪಾಲಾಗಿರುವುದು.
ಉದಾಹರಣೆಗೆ ಶಿವರಾಜ್ ಪಾಟಿಲ್ ಗೃಹ ಮಂತ್ರಿಯಾಗಿರುವುದು.
೫. ಶಿಥಿಲಗೊಂಡ ಕಾನೂನು ವ್ಯವಸ್ಥೆ . ವರ್ಷಗಟ್ಟಲೆ ನಡೆಯುವ ವಿಚಾರಣೆಗಳು. ಅಪರಾಧ ಸಾಬೀತಾದರೂ ಶಿಕ್ಷೆ ನೀಡದಿರುವುದು.
ಉದಾ : ಪಾರ್ಲಿಮೆಂಟ್ ಮೇಲೆ ಧಾಳಿ ಮಾಡಿದ ಆರೋಪಿ ಆಫ್ಜ್ಹಲ್ ಗೇ ಇನ್ನು ಗಲ್ಲಿಗೆರಿಸದಿರುವುದು,
ಬೆಂಗಳೂರಿನಲ್ಲಿ ಬಂಧಿತನಾದ ಉಗ್ರ ಇಮ್ರಾನ್ಗೆ ಇನ್ನು ಶಿಕ್ಷೆ ಆಗದಿರುವುದು. ..
೬. ದೇಶದ್ರೋಹಿಗಳಿಗೆ ರಾಜಕಾರಣಿಗಳ ಬೆಂಬಲ
ಉದಾ : ಆಫ್ಜ್ಹಾಲ್ ನ ಗಳ್ಳನ್ನು ತಡೆಹಿಡಿದ ಕಾಂಗ್ರೆಸ್ ಸರಕಾರ. ಸಂಜಯ್ ದತ್ತ್ ಗೆ ಬೇಲಾದ ಕೆಲವೇ ತಿಂಗಳಿನಲ್ಲಿ ಅವನಜೊತೆ ಬಂಧಿತ ರಾದ ಎಲ್ಲರಿಗು ಸಿಕ್ಕ ಬೇಲ್.
೭. ಮಾರಕವಾದ ಸಿಮಿಯಂಥ ಸಂಘಟನೆಗಳನ್ನು ನಿಷೇಧಿಸದಿರುವುದು.
೮. ಬಲಿಷ್ಠ ಕಾನೂನುಗಳನ್ನು ತರುವಲ್ಲಿ ಅಸಮರ್ಥವಾದ ಸರಕಾರಗಳು.
೯. ಶಿಥಿಲಗೊಂಡ ಬೇಹುಗಾರಿಕಾ ವ್ಯವಸ್ಥೆ ಹಾಗು ಗುಪ್ತ ದಳ.
೧೦. ಇವೆಲ್ಲವೂ ನಡೆಯುತ್ತಿರುವುದು ಮೂಲಭೂತವಾದಿಗಳಾದ ಮುಸ್ಲಿಂ ಗಳಿಂದ ಎಂದು ತಿಳಿದಿದ್ದರೂ , ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ, ಕೇವಲ ಮತದ ಆಸೆಗಾಗಿ ಅವರಿಗೆ ಪ್ರಾತಿನಿಧ್ಯ ಸವಲತ್ತುಗಳನ್ನೂ ಕೊಡುತ್ತಿರುವ ಸರಕಾರಗಳು. ನಾನು ಮುಸ್ಲಿಂ ವಿರೋಧಿಯಲ್ಲ . ನಾನು ಒಪ್ಪುತ್ತೇನೆ "ಎಲ್ಲ ಮುಸ್ಲಿಂ ಗಳೂ ಭಯೋತ್ಪಾದಕರಲ್ಲ . ಆದರೆ ಎಲ್ಲ ಭಯೋತ್ಪಾದಕರು ಮುಸ್ಲಿಂ ಗಳು " .

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನು ಅಸಂಖ್ಯಾತ ಕಾರಣಗಳು ನಮ್ಮ ಗಮನಕ್ಕೆ ಬರುತ್ತವೆ.
ಕಾರಣಗಳು ಏನೇ ಆಗಿರಲಿ ನಾವು ನಮ್ಮ ನೂರಾರು ಸಹೋದರ ಸಹೋದರಿಯರನ್ನು ಕಳೆದುಕೊಂಡಿದ್ದೇವೆ. ಈ ಘೋರ ಅಮಾನವೀಯ ಕೃತ್ಯಕ್ಕೆ ನೂರಾರು ಮುಗ್ಧ ಜೀವಗಳು ಬಲಿಯಾಗಿವೆ. ಇಂದು ಹರೀಶ್ ಕರ್ಕರೆ , ಸಾಲ್ಕರ್, ವಿನೋದ್ ಕಾಮ್ಟೆ ಒಳಗೊಂಡಂತೆ ೨೫ ಕ್ಕೂ ಹೆಚ್ಚು ಜನ ಪೋಲಿಸ್ ಅಧಿಕಾರಿಗಳು ವೀರ ಮರಣ ಅಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಬನ್ನಿ ಈ ಘಟನೆಯ ಸಂತಾಪ ಸೂಚಕವಾಗಿ ಈ ಡಿಸೆಂಬರ್ ೧ ರಂದು ಕಪ್ಪು ಬಣ್ಣದ ಪಟ್ಟಿಯನ್ನು ಎಡ ತೋಳಿಗೆ ಕಟ್ಟುವುದರ ಮೂಲಕ ಹುತಾತ್ಮ್ರೆಲ್ಲರಿಗೆ ನಮ್ಮ ಅಂತಿಮ ನಮನ ಸಲ್ಲಿಸೋಣ. ಜೊತೆಗೆ ಭಯೋತ್ಪಾದನೆಯ ವಿರುಧ್ಧದ ಸಮರಕ್ಕೆ ಕಂಕಣ ಬದ್ಧರಾಗೋಣ.

ಎಚ್ಚರಿಕೆ :: ಭಯೋತ್ಪಾದಕರ ಮುಂದಿನ ಗುರಿ ನಾವಾಗಿರಬಹುದು.

"इस घटनाको देखके जिस का खून नही खौला वो खून नही पानी है
जो देश के काम न आए वो बेकार जवानी है "

****** ಜೈ ಹಿಂದ್ ******